Friday, March 6, 2009

ಒಂದು ಜತೆ ಚಪ್ಪಲಿ, ಗಡಿಯಾರ
ಮಹಾತ್ಮಾ ಗಾಂಧಿ ಭಾರತೀಯರಿಗೆ ಅಮೂಲ್ಯ. ಅವರ ವೃತ್ತಾಕಾರದ ಫ್ರೇಮಿನ ಕನ್ನಡಕ, ಒಂದು ಜತೆ ಚಪ್ಪಲಿ, ಗಡಿಯಾರ, ಊಟದ ತಟ್ಟೆಗಳನ್ನು ವಿಜಯ ಮಲ್ಯ ಅವರು ಸುಮಾರು ಎರಡು ಮಿಲಿಯ ಅಮೇರಿಕನ್ ಡಾಲರ್ ನೀಡಿ ಮತ್ತೆ ಭಾರತಕ್ಕೆ ತರುವ ಅತ್ಯದ್ಭುತ ಸಾಹಸವನ್ನು ಮಾಡಿದ್ದಾರೆ. ಜೇಮ್ಸ್ ಒಟಿಸ್ ಒಮ್ಮೆ ತಾನು ಗಾಂಧಿಯವರ ಈ ಖಾಸಗಿ ಸಾಮಾಗ್ರಿಗಳನ್ನು ಏಲಂ ಮಾಡುವುದಿಲ್ಲ ಎಂದು ಹೇಳಿದರೂ ಕೊನೆಗೂ ಅದು ಭಾರತಕ್ಕೆ ಮರಳುವಂತಾಗಿದೆ. ಅಂದ ಹಾಗೆ ಅದು ಏಲಂ ಆದರೂ ದೆಹಲಿಯ ಹೈಕೋರ್ಟಿನಲ್ಲಿ ಕೇಸೊಂದು ಇರುವುದರಿಂದ ಅದನ್ನು ಭಾರತಕ್ಕೆ ಕೂಡಲೆ ಕಳುಹಿಸಲು ಅಮೇರಿಕಾದ ಸರಕಾರ ಒಪ್ಪಲಾರದು.
ವಿಜಯ ಮಲ್ಯ ಅವರು ಈ ಏಲಂನಲ್ಲಿ ಭಾಗವಹಿಸುವುದು ಸುದ್ದಿಯಾಗಿರಲಿಲ್ಲ. ಭಾರತೀಯ ಮೂಲದ ಸಂತ್ ಸಿಂಘ್ ಚತ್ವಾಲ್ ಅಥವಾ ಅನಿವಾಸಿ ಭಾರತೀಯರು, ಗುಜರಾತ್ ಮೂಲದ ಅಮೇರಿಕಾದಲ್ಲಿರುವ ಮಿಲಿಯಾಧಿಪತಿಗಳು ಇವರಲ್ಲಿ ಯಾರಾದರೂ ಈ ಅಮೂಲ್ಯ ಭಾವನಾತ್ಮಕ ಸಂಪತ್ತನ್ನು ಭಾರತಕ್ಕೆ ನೀಡುವಲ್ಲಿ ಯಶಸ್ವಿಯಾಗಬಹುದೆಂದು ತಿಳಿಯಲಾಗಿತ್ತು. ಭಾರತ ಸರಕಾರವೂ, ಮುಖ್ಯವಾಗಿ ಪ್ರಧಾನಿ ಮನಮೋಹನ್ ಸಿಂಘ್ ಅವರೂ, ಗಾಂಧಿಯವರ ಅಮೂಲ್ಯ ಈ ಸಾಮಗ್ರಿಗಳು ಭಾರತಕ್ಕೆ ಹೇಗಾದರೂ ಮರಳಬೇಕೆಂಬ ಅಭಿಲಾಷೆಯಲ್ಲಿದ್ದರು.
ಒಂದೊಮ್ಮೆ ವಿದೇಶಿಯರು ಭಾರತವನ್ನು ಲೂಟಿಗೈದು ಇಲ್ಲಿರುವ ಅಮೂಲ್ಯ ಸಂಪತ್ತನ್ನು ಯುರೋಪ್ ಮುಂತಾದ ಕಡೆ ಸಾಗಿಸಿರುವುದನ್ನು ಈಗ ಬಲಿಷ್ಟವಾಗುತ್ತಿರುವ ಭಾರತ ಮತ್ತೆ ಪಡೆಯಬಹುದೇ? ಇದಕ್ಕೆ ಸರಕಾರವೇ ಆಗಬೇಕಿಲ್ಲ. ವಿಜಯ ಮಲ್ಯರಂಥ ಉದ್ಯಮಿಗಳು, ವಿದೇಶದಲ್ಲಿ ಇರುವ ಭಾರತೀಯ ಮೂಲದ ಮಿಲಿಯಾಧಿಪತಿಗಳು ಕೆಲಸಮಾಡಬಹುದು. ಹಲವು ತಲೆಮಾರುಗಳಿಗೆ ಬೇಕಾಗುವಷ್ಟು ತಮ್ಮ ಉದ್ಯಮ ಸಾಮ್ರಾಜ್ಯವನ್ನು ಜಗತ್ತಿನಾದ್ಯಂತ ವಿಸ್ತರಿಸಿರುವ ಭಾರತೀಯ ಮೂಲದ ವ್ಯಕ್ತಿಗಳು ಭಾರತದ ಗೌರವವನ್ನು ಎತ್ತಿಹಿಡಿಯುವಂತಹ ಇಂತಹ ಕೆಲಸವನ್ನು ಮಾಡಿದರೆ ಅವರು ಇತಿಹಾಸದಲ್ಲಿ ತಮ್ಮ ಹೆಸರನ್ನು ಅಜರಾಮರಗೊಳಿಸಬಹುದು.
ಮಿಂಚು
ಅಂದ ಹಾಗೆ ಗಾಂಧೀಜಿಯವರ ಕನ್ನಡಕ, ಕೋಲು ಇತ್ಯಾದಿಗಳ ನಕಲಿ ಪ್ರತಿಗಳು ದೆಹಲಿಯ ಮಾಡರ್ನ್ ಆರ್ಟ್ ಗ್ಯಾಲರಿಯಲ್ಲಿ ಜನರಿಗೆ ಸಿಗುವುದಂತೆ. ಸದ್ಯಕ್ಕೆ ಸ್ಟಾಕಿಲ್ಲ! (photo: Reuters/)

6 comments:

 1. ಬಾನಾಡಿ..

  ನಿಜ "ಮಲ್ಯ" ಒಳ್ಳೆಯ ಕೆಲಸವನ್ನೇ ಮಾಡಿದ್ದಾರೆ...

  ಇದು ಭಾವನಾತ್ಮಕ ವಿಷಯ..

  ಬೆಲೆ ಕಟ್ಟಲಾಗುವದಿಲ್ಲ..

  ಸಮಯೋಚಿತ ಲೇಖನಕ್ಕೆ..

  ಧನ್ಯವಾದಗಳು..

  ReplyDelete
 2. ಮದ್ಯದ ದೊರೆ ಎಂದೇ ಕರೆಸಿಕೊಳ್ಳುವ ಮಲ್ಯ ಅವರು.. ಮದ್ಯವನ್ನು ವಿರೋಧಿಸಿದ ಗಾಂಧೀಜಿಯವರ ಅಮೂಲ್ಯ ಸಾಮಗ್ರಿಗಳನ್ನು ಬೆಲೆ ಕಟ್ಟಿಕೊಂಡು ಬರುತ್ತಿದ್ದಾರೆಂದರೆ ಬಲು ಆಶ್ಚರ್ಯವೇ ಸರಿ!!! ಎಂತಹ ವಿಪರ್ಯಾಸ ಕೂಡ ಅಲ್ಲವೇ?

  ReplyDelete
 3. ಮಲ್ಯರು ಟೀಪು ಸುಲ್ತಾನನ ಖಡ್ಗವನ್ನು ಸಹ ಏಲಂದಲ್ಲಿ ಕೊಂಡಿದ್ದರು. ಈಗ ಗಾಂಧೀಜಿಯವರ ವಸ್ತುಗಳನ್ನು ಕೊಂಡಿದ್ದಾರೆ.
  ಇದು ಮಲ್ಯರಲ್ಲಿ ನಾವು ಮೆಚ್ಚಬೇಕಾದಂತಹ ಗುಣ ಎಂದು ಅನ್ನಿಸುತ್ತದೆ.

  ReplyDelete
 4. " ಮಲ್ಯ "...

  ಮಾಡಿದ..

  "ಅಮೂಲ್ಯ "

  ಕೆಲಸ...!

  ReplyDelete
 5. ಬಾನಾಡಿ ಯವರೆ,
  ನಾನು ನನ್ನ ಸ್ನೇಹಿತರೊಡನೆ ಈ ಬಗ್ಗೆ ಮಾತಾಡುತ್ತಿದ್ದೆ. ನೀವು ಬರೆದಿದ್ದೀರ. ಸಮಯೊಚಿತವಾಗಿ. ಮಲ್ಯರ ಮೆಚ್ಚುವಂತಹ ಕೆಲಸವನ್ನು ನೀವು ಮೆಚ್ಚಿದ್ದಕ್ಕೆ ಮೆಚ್ಚುಗೆಗಳು.

  ReplyDelete
 6. ಜೇಮ್ಸ್ ಒಟಿಸ್ ಕೈಯಿಂದ ವಾಟೀಸ್ ಮಲ್ಯರ ಕೈಗೆ.... :)

  ReplyDelete