Monday, January 19, 2009

ಜಾತ್ರೆ, ತೇರು, ನೇಮ, ಕೋಲ, ಬೈದರ್ಕಳ ಗರಡಿ, ಕಂಬಳ

ಭಾನುವಾರ ಮಂಗಳೂರಿನ ಪ್ರೇಮಕ್ಕನಿಗೆ ಫೋನ್ ಮಾಡಿದರೆ ಇನ್ನೂ ಹೊರಡಿಲ್ವಾ? ಎಂಬ ಪ್ರಶ್ನೆ.
ಯಾಕೆ? ಎಲ್ಲಿಗೆ? ನನ್ನದು ಮರು ಪ್ರಶ್ನೆ!
ಬುಧವಾರ ಕದ್ರಿ ತೇರು, ಮಂಗಳವಾರ ವಿಟ್ಲ ತೇರು!
ಕದ್ರಿ ತೇರಿಗೆ ಬರ್ತೇನೆ ಎಂದು ಸುಳ್ಳು ಭರವಸೆಗಳನ್ನು ಕೊಟ್ಟ ನಾನು ಈ ಸಲ ಜಾತ್ರೆಗೆ ಹೋಗುವ ಯೋಜನೆ ಹಾಕಿರಲಿಲ್ಲ. ಈಗಷ್ಟೆ ನೂರಕ್ಕೂ ಮಿಕ್ಕಿ ರಾಷ್ಟ್ರಗಳ 5000 ಪ್ರತಿನಿಧಿಗಳ ಐದು ದಿನಗಳ ಅಂತರಾಷ್ಟ್ರೀಯ ಕಾನ್ಫರೆನ್ಸ್ ನಡೆಸಿ ಸುಸ್ತಾಗಿದ್ದ ನಾನು ಜಾತ್ರೆಯನ್ನು ಮರೆತಿದ್ದೆ. ಕಳೆದ ಕೆಲ ವರ್ಷಗಳಿಂದ ಕದ್ರಿ ತೇರಿಗೆ ತಪ್ಪದೆ ಹಾಜಾರಾಗುತ್ತಿದ್ದ ನಾನು ಈ ಸಲವೂ ಬರುವೆನೆಂಬ ಕಾತರದಿಂದ ಪ್ರೇಮಕ್ಕ ಉತ್ಸುಕರಾಗಿದ್ದರು.
ಬಹಳಷ್ಟು ವರ್ಷಗಳಿಂದ ಕಂಬಳ ನೋಡದಿದ್ದ ನಾನು ಈ ಸಲ ಕಂಬಳಕ್ಕೆ ಬರುತ್ತೇನೆ ಎಂದು ಮತ್ತೊಂದು ಭರವಸೆ ನೀಡಿ ಫೋನಿಟ್ಟೆ.
ಯಾವ ಕಂಬಳ ಎಲ್ಲಿ ಅಂತ ಗುರು ಕೊಟ್ಟ ಮ್ಯಾಗ್ನಂ ಅವರ ತುಳುನಾಡು ಪಂಚಾಂಗ ಕ್ಯಾಲೆಂಡರ್ ನೋಡಿ ಜಾತ್ರೆ, ತೇರು, ನೇಮ, ಕೋಲ, ಬೈದರ್ಕಳ ಗರಡಿ, ಕಂಬಳ ಎಲ್ಲ ವಿವರಗಳನ್ನು ಕಳೆ ಹಾಕಿದೆ. ಪ್ರೇಮಕ್ಕನೊಡನೆ ಇನ್ನೊಮ್ಮೆ ಮಾತಾಡುವುದಕ್ಕಿಂತ ಮೊದಲು ನನ್ನ ಕಾರ್ಯಕ್ರಮ ನಿರ್ಧರಿಸಿಯೇ ಬಿಡ್ತೇನೆ ಎಂದು ಕೊಂಡಿದ್ದೇನೆ.
ದೂರದೂರಿನಲ್ಲಿರುವವರಿಗೆ ಊರಿನ ಜಾತ್ರೆ ಮತ್ತೆ ಮತ್ತೆ ಕರೆಯುತ್ತಿದೆ. ಒಂದೆರಡು ದಿನ ಅವಕಾಶಮಾಡಿ ಹೋಗಿಬರುವುದರಲ್ಲಿ ಇಡೀ ವರ್ಷದ ಸಂಭ್ರಮವಿರುತ್ತದೆ.
ಜಾತ್ರೆ, ತೇರು, ನೇಮ, ಕೋಲ, ಬೈದರ್ಕಳ ಗರಡಿ, ಕಂಬಳ
ಜನವರಿ 20 ಕಾಂತಾವರ ತೇರು, ವಿಟ್ಲ ತೇರು.
ಜನವರಿ 21 ಕದ್ರಿ ಮಂಜುನಾಥನ ತೇರು.
ಫೆಬ್ರವರಿ2 ಪಣಂಬೂರು ವಿಷ್ಣುಮೂರ್ತಿ ತೇರು ಮತ್ತು ಮಂಗಳೂರಿನ ವೆಂಕಟರಮಣ ತೇರು
ಫೆಬ್ರವರಿ 5 ಪಂಜ ಪಂಚಲಿಂಗೇಶ್ವರ ತೇರು
ಫೆಬ್ರವರಿ 11 ಹೆರ್ಗ ದುರ್ಗಾಪರಮೇಶ್ವರಿ ತೇರು
ಫೆಬ್ರವರಿ 14 ಹೆಬ್ರಿ ಅನಂತ ಪದ್ಮನಾಭ ತೇರು
ಫೆಬ್ರವರಿ 17 ಕಾಪು ಜನಾರ್ಧನ ತೇರು
ಫೆಬ್ರವರಿ 25 ಕಾರಿಂಜ ತೇರು ಮತ್ತು ಮಾರ್ಪಳ್ಳಿ ತೇರು
ಮಾರ್ಚ್ 1 ಉದ್ಯಾವರ ಸಿದ್ದಿವಿನಾಯಕ ತೇರು
ಮಾರ್ಚ್ 3 ಬಂಟ್ವಾಳ ತೇರು ಮತ್ತು ಮೂಡಬಿದ್ರೆ ಹಿರೇಬಸದಿ ತೇರು
ಎಪ್ರಿಲ್ 2 ಬಾರಕೂರು ಪಂಚಲಿಂಗೇಶ್ವರ ತೇರು
ಎಪ್ರಿಲ್ 4 ಕಾರ್ಕಳ ಅನಂತ ಶಯನ ತೇರು
ಎಪ್ರಿಲ್ 9 ಮೂಡಬಿದ್ರೆ ಬಸದಿ ತೇರು
ಎಪ್ರಿಲ್ 15 ಬಪ್ಪನಾಡು ತೇರು
ಎಪ್ರಿಲ್ 19 ಕಟೀಲು ತೇರು, ಕಡೇಶಿವಾಲಯ ತೇರು
ಎಪ್ರಿಲ್ 20 ಧರ್ಮಸ್ಥಳ ತೇರು
ಎಪ್ರಿಲ್ 21 ವೇಣೂರು ಮಹಾಲಿಂಗೇಶ್ವರ ತೇರು
ಜಾತ್ರೆಗಳು
ಫೆಬ್ರವರಿ 5 ಮಾಣಿ ಉಳ್ಳಾಲ್ತಿ ಜಾತ್ರೆ
ಫೆಬ್ರವರಿ 13 ಕೆಳಿಂಜೆ ಉಳ್ಳಾಲ್ತಿ ಜಾತ್ರೆ
ಫೆಬ್ರವರಿ 22 ಪೆರುವಾಯಿ ಜಾತ್ರೆ
ಫೆಬ್ರವರಿ 16, 23 ಮತ್ತು ಮಾರ್ಚ್ 10 ಉಪ್ಪಿನಂಗಡಿ ಮಖೆ ಜಾತ್ರೆ
ಎಪ್ರಿಲ್ 10 ಪೊಳಲಿ ಜಾತ್ರೆ
ಮೇ 6 ಉಬರಡ್ಕ ನಿಟ್ಟೂರು ಉಳ್ಳಾಕುಲು ಜಾತ್ರೆ
ಮೇ 24 ಬೆಟ್ಟಂಪಾಡಿ ಜಾತ್ರೆ
ಬೈದರ್ಕಳ ಗರಡಿ ಜಾತ್ರೆ ನೇಮ
ಜನವರಿ 13 ಕಂಕನಾಡಿ ಬೈದರ್ಕಳ
ಫೆಬ್ರವರಿ 8 ಕಿನ್ನಿಮೂಲ್ಕಿ ಗರಡಿ ನೇಮ, ಚಿಪ್ಪಾರು ಗರಡಿ ನೇಮ
ಫೆಬ್ರವರಿ 9 ಮೇಲಂತಬೆಟ್ಟು ಬೈದರ್ಕಳ, ಪಂಜ ಗರಡಿ ನೇಮ, ಆಲಂಗಾರು ಗರಡಿ ನೇಮ
ಫೆಬ್ರವರಿ 10 ವಾಲ್ಪಾಡಿ ಗರಡಿ ಜಾತ್ರೆ
ಫೆಬ್ರವರಿ 13 ಶಿರ್ಲಾಲು ಗರಡಿ ನೇಮ
ಫೆಬ್ರವರಿ 23 ತೋನ್ಸೆ ಗರಡಿ ನೇಮ
ಫೆಬ್ರವರಿ 26 ನಡ್ಯೋಡಿ ಗರಡಿ ನೇಮ
ಮಾರ್ಚ್ 10 ನೀರ ಮಜಲು, ಬೊಮ್ಮರೊಟ್ಟು, ದೈಲಬೆಟ್ಟು, ಕೈಪಂಗ ಮತ್ತು ಪಾಪೆ ಮಜಲಿನಲ್ಲಿ ಗರಡಿ ನೇಮ
ಮಾರ್ಚ್ 11 ಉಳಿಯ ಅರಸು ಉಳ್ಳಾಲ್ತಿ ಗರಡಿ ನೇಮ
ಮಾರ್ಚ್ 15 ಮಾರ್ನಾಡು ಗರಡಿ ನೇಮ
ಮಾರ್ಚ್ 24 ಬಡಕೋಡಿ ನೇರಳಗುಡ್ಡೆ ಗರಡಿ ನೇಮ
ಎಪ್ರಿಲ್ 4 ಬನ್ನಾಡಿ ಗರಡಿ
ಎಪ್ರಿಲ್ 13 ಪೊನ್ನೊಟ್ಟು ಗರಡಿ ಕೋಲ
ಎಪ್ರಿಲ್ 14 ರೆಂಜಲಾಡಿ ಗರಡಿ ನೇಮ
ಎಪ್ರಿಲ್ 16 ಅಂಡಾರು ಗರಡಿ ನೇಮ
ಕಂಬಳಗಳು
ಜನವರಿ 24 ನಂದಿಕೂರು ಕೋಟಿ ಚೆನ್ನಯ ಕಂಬಳ
ಜನವರಿ 31 ಐಕಳ ಬಾವ ಕಾಂತಾಬಾರೆ ಬೂದಬಾರೆ ಕಂಬಳ
ಫೆಬ್ರವರಿ 8 ವೇಣೂರು ಪೆರ್ಮುದೆ ಸೂರ್ಯ ಚಂದ್ರ ಕಂಬಳ
ಫೆಬ್ರವರಿ 14 ಕಾವಳಕಟ್ಟೆ ಮೂಡೂರು ಪಡೂರು ಕಂಬಳ
ಫೆಬ್ರವರಿ 21 ಪಜೀರು ಕೇದಗೆಬೈಲು ಲವ ಕುಶ ಕಂಬಳ
ಫೆಬ್ರವರಿ 28 ಈದು ಜಯ ವಿಜಯ ಕಂಬಳ
ಮಾರ್ಚ್ 8 ಪುತ್ತೂರು ಕೋಟಿ ಚೆನ್ನಯ ಕಂಬಳ
ಮಾರ್ಚ್ 15 ಉಪ್ಪಿನಂಗಡಿ ವಿಜಯ ವಿಕ್ರಮ ಕಂಬಳ
ಉಳಿದಂತೆ...
ಮಾರ್ಚ್ 21 ಅಲೆತ್ತೂರು ಪಂಜಿರ್ಲಿ ನೇಮ
ಮಾರ್ಚ್ 27 ಮಲಾರು ಮಲರಾಯ ಕೊಡಿ
ಎಪ್ರಿಲ್ 8 ಬಪ್ಪನಾಡು ಕೊಡಿ
ಎಪ್ರಿಲ್ 15 ಧರ್ಮಸ್ಥಳ ಅಣ್ಣಪ್ಪ ದೈವಗಳ ನೇಮ
ಎಪ್ರಿಲ್ 17 ಪುತ್ತೂರು ಮಹಾಲಿಂಗೇಶ್ವರ ಕಡೇಬಂಡಿ
ಎಪ್ರಿಲ್ 29 ಬಾಯಾರು ಕಡೇ ಬಂಡಿ

7 comments:

 1. ತುಳುನಾಡು ಪಂಚಾಂಗದ ಬಗ್ಗೆ ಬರೆದುದಕ್ಕೆ ಸೊಲ್ಮೆ ಬಾನಾಡಿ. ಬಹುಶ ಬಹಳಷ್ಟು ಜನರಿಗೆ ಪಂಚಾಂಗ ಎಂದೊಡನೆ ನಮ್ಮ ಪಾರಂಪರಿಕ ಪಂಚಾಂಗ ಪುಸ್ತಕದ ನೆನಪೇ ಆಗುತ್ತೆ.
  ಅಷ್ಟರಲ್ಲೇ ನಾವು ಈ ಕ್ಯಾಲೆಂಡರ್ ನಂತಹ ಪಂಚಾಂಗ ಶುರು ಹಚ್ಚಿ ಆರು ವರ್ಷಗಳಾದವು. ಎಷ್ಟೆಲ್ಲ ಜನರನ್ನು ನಾನು ತುಳುನಾಡಿನ ತುಂಬೆಲ್ಲ ಹರಡಿರುವ ಈ ಉತ್ಸವಗಳನ್ನು ನಿಗದಿ ಮಾಡುವ ಬೇಸಿಸ್ ಅನ್ನು ಅರ್ಥ ಮಾಡಿಕೊಳ್ಳಲು ಕಾಡಿಸಿ ಪೀಡಿಸಿದ್ದೇನೆ ಎಂಬುದು ಈಗ ದೆಹಲಿಗೆ ಬಂದು ತಣ್ಣಗೆ ಕುಳಿತಿರುವ ನನಗೆ ನೆನಪಾಗಿ ಒಂದು ಬಾರಿ ಅವರೆಲ್ಲರಿಗೆ ಫೋನ್ ಮಾಡಿ ಥ್ಯಾಂಕ್ಸ್ ಹೇಳೋಣ ಎಂದು ಅನಿಸಿತು.
  ಹೆಚ್ಚಿನವರು ಫೋಟೋ ಚಂದ ಬಂದಿದೆ ಮಾರಾಯ ಅಂತ ಹೇಳುವವರು. ಆದರೆ ನೀವು ಉತ್ಸವಗಳ ಪಟ್ಟಿಯಲ್ಲೂ ಕೆಲಸ ಗುರುತಿಸಿ ಬರೆದಿದ್ದು ಸಾಂತ್ವನ ನೀಡಿದೆ.

  ReplyDelete
 2. ದಕ್ಷಿಣ ಕನ್ನಡದ ಪಂಚಾಂಗವನ್ನೇ ತೆರೆದಿಟ್ಟುಬಿಟ್ಟಿದ್ದೀರಲ್ಲಾ!
  ಉತ್ಸವಗಳು,ಜಾತ್ರೆಗಳು ನಮ್ಮ ಜಾನಪದರ ಅಮೂಲ್ಯ ಕೊಡುಗೆ.
  ಧನ್ಯವಾದಗಳು
  ಅಶೊಕ ಉಚ್ಚಂಗಿ
  http://mysoremallige01.blogspot.com/

  ReplyDelete
 3. ಛೇ ತೇರು ನೇಮ ನೋಡಿ ಎಷ್ಟು ವರ್ಷಗಳಾಯ್ತು:(

  ಧನ್ಯವಾದಗಳು ಪಂಚಾಂಗ ಪ್ರಕಟಿಸಿದ್ದಕ್ಕೆ.

  ReplyDelete
 4. ಸರ್..ತುಂಬಾ ಖುಷಿಯಾಯಿತು. ತೇರು ನೋಡದೆ ತುಂಬಾ ವರ್ಷ ಆಯಿತು..ಹತ್ತನೆಯ ಕ್ಲಾಸು ಮುಗಿದ ಮೇಲೆ ಮನೆಯಿಂದ ದೂರ..ಈ ತೇರು, ಜಾತ್ರೆ ಎಂಥದ್ದೂ ಇಲ್ಲ. ಏನೇ ಇರಲಿ ಕಡಲತೀರದ ಸಾಂಸ್ಕೃತಿಕ ವೈಭವವನ್ನು ನಿಮ್ಮ ಲೇಖನದ ಮೂಲಕ ಕಟ್ಟಿಕೊಟ್ಟಿದ್ದಕ್ಕೆ ಧನ್ಯವಾದ.
  -ಚಿತ್ರಾ

  ReplyDelete
 5. sumar teru missagide.:)but, thanks for reminding all this!!

  ReplyDelete
 6. yes. good work. Jaatreya bagge, kambalada bagge masth maahiti...

  ReplyDelete