Wednesday, December 17, 2008

ಕತ್ತಲೆಯಿಂದ ಬೆಳಕಿಗೆ

ಮಾಧ್ಯಮಗಳು ಸಮಾಜದ ಕನ್ನಡಿ ಎನ್ನುತ್ತೇವೆ. ಸಮಾಜದಲ್ಲಿ ಒಳ್ಳೆಯತನವಿದ್ದರೆ ಮಾಧ್ಯಮವು ಅದನ್ನೇ ತೋರಿಸುತ್ತದೆ, ಕೆಟ್ಟದು ಇದ್ದರೆ ಕೆಟ್ಟದನ್ನು ತೋರಿಸುತ್ತದೆ ಎಂಬುದು ಮಾಧ್ಯಮದವರು ಅವರನ್ನು ಪ್ರಶ್ನಿಸಿದಾಗ ಹೇಳುವ ಉತ್ತರ. ಮುಂಬಯಿ ದುರಂತದ ನಂತರ ಕೆಲವು ಮ್ಯಾಗಝಿನ್ ಗಳ ಮುಖಪುಟವನ್ನು ನೋಡಿದಾಗ ನನಗೆ ಅನಿಸಿದ್ದು ಅವರೆಲ್ಲ ಅದೆಷ್ಟು ಚೆನ್ನಾಗಿ ಈ ದುರಂತದ ವಿವಿಧ ಮಜಲುಗಳನ್ನು ಸೆರೆಹಿಡಿದ್ದಾರೆ ಎಂದು.ಆದರೆ ಒಂದು ಸಣ್ಣ ಪತ್ರಿಕೆ ದೆಹಲಿ ಕರ್ನಾಟಕ ಸಂಘದ ಅಭಿಮತ ನನ್ನ ಮುಚ್ಚಿದ ಕಣ್ಣನ್ನು ತೆರೆಯಿತು. ಅದರ ಮುಖಪುಟದಲ್ಲಿ ಮುಂಬಯಿ ದುರಂತದ ಯಾವುದೇ ಭಯಾನಕ ಚಿತ್ರವಿರಲಿಲ್ಲ. ಕತ್ತಲೆಯ ಕಪ್ಪಿನಿಂದ ಮೊಂಬತ್ತಿಗಳನ್ನು ಉರಿಸುವ ಚಿತ್ರ. ಹೇಳಲಾಗದ ಅದೆಷ್ಟೋ ಮಾತುಗಳನ್ನು ಈ ಮುಖಪುಟ ನೀಡಿತು. ೬೦ ಗಂಟೆಗಳ ಭಯೋತ್ಪಾದನೆಯ ನೇರ ಪ್ರಸಾರ, ನೆಟ್‌ಗಳಲ್ಲಿ ಹರಿದಾಡಿದಾಗ ಕಂಡ ದುರಂತದ ಚಿತ್ರಗಳು, ಮತ್ತೆ ಪತ್ರಿಕೆಗಳಲ್ಲಿ ದುರಂತದ ಚಿತ್ರಗಳು.ಚಿತ್ರಗಳನ್ನು ಕಂಡವರೆಲ್ಲರ ಎದೆಯೊಳಗೆ ಈ ದುರಂತದ ಎಳೆಗಳು ಸ್ಥಾಯಿಯಾಗಿರದಿರದು.ಇಂತೆಲ್ಲಾ ಕ್ಷಣಗಳಲ್ಲಿ ಅಭಿಮತದ ಮುಖಪುಟ ಹೊಸ ಹೊಳಪನ್ನು ನೀಡಿತು. ಅದನ್ನು ರಚಿಸಿದ ಗುರುಬಾಳಿಗ ಬ್ಲಾಗಿಗರಿಗೆ ಅಪರಿಚಿತರಲ್ಲ. ಅವರು ಅತ್ಯಂತ ಸಂವೇದನಾಶೀಲ ಹೃದಯವಿರುವ ಒಬ್ಬ ಕಲಾವಿದ, ಬರಹಗಾರ.ಅವರ ಕತೆಗಳನ್ನು ಓದಿದವರಿಗೆ ಅವರ ಪ್ರತಿಭೆಯ ಸೆಳೆ ಕಂಡುಬರುತ್ತದೆ.ಮಹಾನಗರಗಳಲ್ಲಿ ಸಂವೇದನೆಯಿಂದ ಬದುಕುತ್ತಿರುವ ಇಂತಹವರಿಗೆ ಭಯೋತ್ಪಾದನೆಗಳ ನಡುವೆಯೂ ಬೆಳಕು ಕಂಡಾಗ ಸೃಜನಶೀಲತೆ ಮುಂದುವರಿಯುತ್ತದೆ.ಭಲೇ ಬಾಳಿಗ.
ಒಲವಿನಿಂದ

ಬಾನಾಡಿ

14 comments:

 1. ಬಾನಾಡಿ....
  ನಿಮ್ಮ ಬ್ಲೋಗಿನ ಹೆಸರು ಸಾರ್ಥಕವಾಗುವಂತಿದೆ ...

  ಯಾರೂ ಇದುವರೆಗೆ ಯೋಚಿಸಿರದ ವಿಚಾರ ಇದು..

  ಘಟನೆಯನ್ನು ಮಾಧ್ಯಮದವರು ವ್ಯಾವಹಾರಿಕ ದ್ರಷ್ಟಿಯಿಂದಲೇ ನೋಡುತ್ತಾರೆ..

  ನನ್ನ ಮಿತ್ರ "ದಿವಾಕರ"ನ ಕವನವಿದೆ ನನ್ನ ಬ್ಲೋಗಿನಲ್ಲಿ ತಪ್ಪದೆ ಓದಿ...

  ನಿಮ್ಮ ಈ ಅಂಕಣ ನನಗಿಷ್ಟವಾಯಿತು...
  ಧನ್ಯವಾದಗಳು...

  ReplyDelete
 2. ಬಾನಾಡಿಯವರೇ,
  ನಿಮ್ಮ ಲೇಖನಕ್ಕೆ ನನ್ನ ಪ್ರತಿಶತ ನೂರರ ಸಹಮತವಿದೆ, ನಿಮ್ಮ ಬ್ಲಾಗ್ ಕೊಂಡಿ ಕದ್ದಿದ್ದೇನೆ ದಯವಿಟ್ಟು ಈ ಬಡವನ ಮೇಲೆ ದೂರು ನೀಡದಿರಿ [:)], ಪ್ರೀತಿಯಿರಲಿ.
  -ರಾಜೇಶ್ ಮಂಜುನಾಥ್

  ReplyDelete
 3. ಮಹಾನಗರಗಳಲ್ಲಿ ಕಥೆ, ಕವನ, ಬರಹ, ಕಲೆ ಮುಂತಾದುವನ್ನು ಕಟ್ಟುವ ಯತ್ನದಲ್ಲಿರುವ ಗುರುಬಾಳಿಗರ ಬಗ್ಗೆ ಮಾತಾಡಲು ಶುರುಮಾಡಿದರೆ ಸಿಮೆಂಟು ಮರಳಿನ ಮಧ್ಯೆ ಇಟ್ಟಿಗೆ ಸಿಮೆಂಟು ತಂದು ನಿಮ್ಮಕೆಲಸ ಶುರು ಮಾಡಿದಿರಲ್ಲ ಮಾರಾಯ್ರ...
  ಧನ್ಯವಾದಗಳು ಪ್ರಕಾಶದಿಂದ ಕತ್ತಲೆಗೆ ಬಂದಿದಕ್ಕೆ.
  ಒಲವಿನಿಂದ
  ಬಾನಾಡಿ

  ReplyDelete
 4. ನಿಮ್ಮ ಬ್ಲಾಗ್ ಚೆನ್ನಾಗಿದೆ. ಈಗ ಮೊದಲ ಲೇಖನಗಳನ್ನು ಓದಲು ಪ್ರಾರಂಭಿಸಿದ್ದೇನೆ..

  ಅಭಿಮತದ ಮುಖಪುಟವನ್ನು ನೀಡಿದ್ದಕ್ಕೆ ಧನ್ಯವಾದಗಳು. ಅದು ಅತ್ಯಂತ ಸೂಕ್ತವಾದ ಮುಖಪುಟ ಚಿತ್ರ ಅನ್ನಿಸುತ್ತದೆ.

  ReplyDelete
 5. ನಿಮ್ಮ ಅನಿಸಿಕೆಗೆ ನನ್ನ ಅಭಿಮತವೂ ಇದೆ. :) ನಿಜಕ್ಕೂ ತುಂಬಾ ಸುಂದರ ಹಾಗೂ ಅರ್ಥಪೂರ್ಣ ಮುಖಪುಟ.

  ReplyDelete
 6. ಸರ್..ನಾನೂ ಮಾಧ್ಯಮದಲ್ಲಿ ಕೆಲಸ ಮಾಡುವುದರಿಂದ ಏನನ್ನೂ ಹೆಳಲಾರೆ. ಬರಹ ತುಂಬಾ ಚೆನ್ನಾಗಿದೆ. ಸಮಾಜದ ಕನ್ನಡಿ 'ಕನ್ನಡಿ'ಯಾಗೇ ಇರಬೇಕು. ಗುರು ಬಾಳಿಗ ಅವರಿಗೂ ನನ್ನ ನೆನೆಕೆಗಳನ್ನು ತಿಳಿಸಿ, ಅಭಿನಂದನೆಗಳು.
  ತುಂಬುಪ್ರೀತಿ,
  ಚಿತ್ರಾ

  ReplyDelete
 7. ಬಾನಾಡಿಯವರೆ...
  ಗುರು ಬಾಳಿಗಾರವರಿಗೆ ನನ್ನ ನಮನ ತಿಳಿಸಿ..

  ಇದು ನನ್ನ ಪ್ರತಿಕ್ರಿಯೆಯಲ್ಲಿ ಬಿಟ್ಟು ಹೋದದ್ದಕ್ಕೆ ಕ್ಷಮೆ ಇರಲಿ..

  ಬಾಕಿ ಎಲ್ಲ ಸರಿ ಇದೆಯಲ್ಲ..!!

  ಧನ್ಯವಾದಗಳು..

  ReplyDelete
 8. It is a good observation. People who stand against the current trends remain with us for long time, Regards- P. Bilimale

  ReplyDelete
 9. ಅರೆ...ಇದು ನನ್ನ ಚಿತ್ರ...:) ಗುರು ಚಿತ್ರ ಕೇಳಿದ್ದು ನೆನಪು, ಆದರೆ ಅದನ್ನ ಉಪಯೋಗಿಸಿದರ ಇಲ್ಲವ ಅಂತ ಕೇಳುವುದು ಮರೆತು ಹೋಯಿತು. ಇಲ್ಲಿ ನೋಡುವ ಭಾಗ್ಯ ಸಿಕ್ಕಿತು..ಥ್ಯಾಂಕ್ಸ್ ಗುರು..ಚೆನ್ನಾಗಿ ಬಂದಿದೆ. ಬಾನಾಡಿಯವರಿಗೂ ಥ್ಯಾಂಕ್ಸ್

  ReplyDelete
 10. ಮುಖಪುಟದಲ್ಲಿ ಚಿತ್ರಕಾರನ ಹೆಸರು (ಮಹೇಂದ್ರ ಸಿಂಹ) ಕೊಟ್ಟಿದ್ದಾರೆ ಗುರುವರ್ಯರು. ಮಹೇಂದ್ರರೇ ನಿಮ್ಮ ಚಿತ್ರವನ್ನು ಉಪಯೋಗಿಸಿ ಕವರ್ ಚಿತ್ರ ಕೊಟ್ಟ ಗುರು ಬಾಳಿಗರಿಗೊಂದು ಅಭಿನಂದನೆ. ಉತ್ತಮ ಚಿತ್ರ ಸಮಯಕ್ಕೆ ಸರಿಯಾಗಿ ಕೊಟ್ಟ ನಿಮಗೂ ವಂದನೆಗಳು.
  ಒಲವಿನಿಂದ
  ಬಾನಾಡಿ

  ReplyDelete
 11. ವ್ಯಾಪಾರೀ ಪತ್ರಿಕೆಗಳಿಗೂ,ಮಾನವೀಯ ಪತ್ರಿಕೆಗಳಿಗೂ ಇರುವ ಅಂತರವನ್ನು ಸರಿಯಾಗಿ ತೋರಿಸಿದ್ದೀರಿ. ದೊಡ್ಡ ಪತ್ರಿಕೆಗಳೆಲ್ಲ
  sensational journalism ಮಾಡುವಾಗ, ಪತ್ರಿಕಾಧರ್ಮಕ್ಕೆ ಬದ್ಧವಾದ ಕೆಲವಾದರೂ ಪತ್ರಿಕೆಗಳು ಇರುವದು
  ಖುಶಿಯ ವಿಷಯ.
  ನಿಮಗೆ, ಗುರು ಬಾಳಿಗಾರಿಗೆ ಹಾಗೂ ಮಹೇನ್ ಸಿಮ್ಹಾರಿಗೆ ಅಭಿನಂದನೆಗಳು.

  ReplyDelete
 12. ನಿಮ್ಮ ಅಭಿಮಾನಕ್ಕೆ ಸೊಲ್ಮೆ ಬಾಲಾಜಿ

  ಗೆಳೆಯ ಮಹೇಂದ್ರ ಸಿಂಹ ಅವರ ಫೋಟೋ ಈ ಪುಟದ ಜೀವಾಳ.
  ಆದುದರಿಂದ ಸಂಪೂರ್ಣ ಕ್ರೆಡಿಟ್ಟು ಅವರಿಗೆ.
  ಅಭಿನಂದಿಸಿದ ಎಲ್ಲರಿಗೂ ನನ್ನ ವಂದನೆಗಳು.

  ReplyDelete
 13. This comment has been removed by the author.

  ReplyDelete