Friday, June 27, 2008

ಬುಟ್ಟಿಯಿಂದ ತಟ್ಟೆಗೆ

ಮಳೆಗಾಲ ಆರಂಭವಾಯ್ತು ಅಂದ್ರೆ ಕಡಲಿಗೆ ಹೋಗುವವರಿಗೆ ರಜೆ. ಇದು ಈ ವರ್ಷದ ಕೊನೆ ಕಂತು. 'ಕಾಣೆ' ಮೀನಿಗೆ ಕಿಲೋ ಒಂದಕ್ಕೆ ರೂ. ೩೬೦/- . ಸಣ್ಣ ಮೀನು -ಕೊಳ್ಳ ತರು - ಸಾರಿಗೆ ಆಗಬಹುದು ಎನ್ನುತ್ತಾನೆ ಸಾಯ್ಬ.






ಕಾಣೆ ಮೀನು - ಅಪರೂಪದ ರುಚಿ. ಹಾಗಾಗಿ ಮಂಗಳೂರಲ್ಲಿ ಅಪರೂಪ! ಎಲ್ಲ ಬೆಂಗಳೂರಿಗೆ ಬರುತ್ತದೆ.


ಮಳೆ ಶುರುವಾಯ್ತೆಂದರೆ ಮುಗಿದ ಮೀನಿನ ಬುಟ್ಟಿಯೂ ನೆನೆಯುತ್ತದೆ - ಮಳೆಯಲ್ಲಿ - ಆ ಹಳೆ ದಿನಗಳನ್ನು. ಜತೆಗಿದ್ದ ಹತ್ತು ಹದಿನೈದು ಬುಟ್ಟಿಗಳನ್ನು. ಈಗ ಒಂಟಿ ಯಾಗಿ ನೆನೆಯುತ್ತಿದೆ.














ದಿನದ ವ್ಯಾಪಾರ ಕುದುರಿಸಿ ಕೈಗೆ ಸಿಕ್ಕ ಹಣ ಜೇಬಿಗೆ ಸೇರಿದಾಗ ಮನಸ್ಸಿನ ಸಂತೋಷ ತುಟಿಯಲ್ಲಿ ಅರಳಿದೆ ಮುಗುಳು ನಗೆಯ ಮಲ್ಲಿಗೆಯಾಗಿ.


ಕೊನೆಗೂ ಬುಟ್ಟಿಯಿಂದ ತಟ್ಟೆಗೆ ಬರುವ ಆತುರ...

2 comments:

  1. ಮೀನು ತಿನ್ನದೇ ತು೦ಬಾ ಸಮಯವಾಯಿತು. ಹತ್ತಿರದಲ್ಲಿ ಮ೦ಗಳೂರು ಹೋಟೇಲ್ ಸಹ ಇಲ್ಲ. ಬೆ೦ಗಳೂರು ಹೋಟೇಲಿನ ಮೀನಿನ ಸಾರು ಮ೦ಗಳೂರಿನ ಮೀನಿನ ಸಾರಿನ ರುಚಿಯ ಹತ್ತಿರಕ್ಕೋ ಬರುವುದಿಲ್ಲ.

    ReplyDelete
  2. ಸರ್,.
    ಮೀನು ಅಂದಾಗ ಆಸೆಯಾಗುತ್ತದೆ ಸರ್. ಇಲ್ಲಿ ಪ್ರತಿ ಭಾನುವಾರ ಮೀನು ಸಿಗುವ ಮಾರ್ಕೆಟ್ ಅಥವಾ ಮಂಗ್ಳೂರು ಹೋಟೇಲ್ ಗಳನ್ನು ಹುಡುಕಿ ಹೋಗುತ್ತೇನೆ.
    ಪೋಟೋ ತುಂಬಾ ಚೆನ್ನಾಗಿದೆ
    ಪ್ರೀತಿಯಿಂದ,
    ಶರಧಿ

    ReplyDelete